ಇವನೊಬ್ಬ ಮನುಷ್ಯನೆ / If This is a Man

Sanket Patil
1 min readNov 29, 2020

--

I came across this hard hitting and timeless poem by Primo Levi. I couldn’t help but make an attempt to translate it into Kannada.

ನೀವುಗಳು ನಿಮ್ಮ ಬೆಚ್ಚನೆಯ ಮನೆಗಳ
ಭದ್ರತೆಯಲಿ ಬದುಕುವವರು,
ನೀವುಗಳು ಸಂಜೆಯಲಿ ಮರಳಿದಾಗ ಬಿಸಿಯೂಟದ
ಜೊತೆ ಅಕ್ಕರೆಯ ಮುಖಗಳ ಕಾಣುವವರು:
ಆಲೋಚಿಸಿ ಇವನೊಬ್ಬ ಮನುಷ್ಯನೇ
ಮಣ್ಣಿನಲಿ ದುಡಿವವನು
ನೆಮ್ಮದಿ ಗೊತ್ತಿಲ್ಲದವನು
ರೊಟ್ಟಿ ತುಂಡಿಗೆ ಅಡರಾಯಿಸುವವನು
ಒಂದೇ ಹೂಂ ಇಲ್ಲಾ ಊಹೂಂ ದೆಸೆಯಿಂದ ಸಾಯುವವನು.
ಆಲೋಚಿಸಿ ಇವಳೊಬ್ಬ ಮನುಷ್ಯಳೇ,
ಕೂದಲಿಲ್ಲದೆ ಹೆಸರಿಲ್ಲದೆ ಮತ್ತಿನ್ನು
ನೆನಪು ಮಾಡಿಕೊಳ್ಳಲು ಕಸುವೂ ಇಲ್ಲದೇ,
ಅವಳ ಕಣ್ಣು ಬರಿದು ಮತ್ತು ಬಸಿರು ತಣ್ಣಗೆ
ಮಾಗಿ ಕಾಲದ ಕಪ್ಪೆಯಂತೆ.
ಧೇನಿಸಿ ಇದು ಇಲ್ಲಿಗೆ ಬಂತೆಂಬುದರ ಬಗೆಗೆ:
ನಾನು ಈ ಒಂದಷ್ಟು ನುಡಿ ನಿಮ್ಮಗಳ ಮುಂದಿಡುತ್ತೇನೆ.
ಕಡೆಯಿಸಿಕೊಳ್ಳಿ ಅವನ್ನು ನಿಮ್ಮೆದೆಗಳಲ್ಲಿ
ಮನೆಯಲ್ಲಿ, ಬೀದಿಯಲ್ಲಿ
ಹಾಸಿಗೆಗೆ ಒರಗುವಾಗ, ಎದ್ದೇಳುವಾಗ;
ಮತ್ತೆ ಮತ್ತೆ ಮೆಲುಕು ಹಾಕಿ ನಿಮ್ಮಗಳ ಮಕ್ಕಳ ಮುಂದೆ,
ಇಲ್ಲೆಂದರೆ ನಿಮ್ಮ ಮನೆ ಮುರಿದು ಬೀಳಲಿ,
ಬೇನೆಗಳು ನಿಮ್ಮಗಳ ಕಾಲ್ಗೆಡಿಸಲಿ,
ನಿಮ್ಮ ಮಕ್ಕಳು ನಿಮ್ಮೊಟ್ಟಿಗೆ ಮುಖ ಹರಿದುಕೊಳ್ಳಲಿ.

--

--